Posts

Showing posts from June, 2025

ಶರಣ ಇರ್ಷಾದ್

  ಶರಣ ಇರ್ಷಾದ್ ಇವತ್ತಿನ ಅಂತರ್ಜಾಲ ಪ್ರವಚನಗೋಷ್ಠಿಯ ನಂತರ, ದೇವಸ್ಥಾನಕ್ಕೆ ಹೊರಟು ಲಿಫ್ಟ್ ಏರಿದ ಹೊತ್ತು, ನಮ್ಮ ಬಿಲ್ಡಿಂಗ್ ಕೇರ್ ಟೇಕರ್ ಇರ್ಷಾದ್ ಸಿಕ್ಕ. ಇರ್ಷಾದ್ ಧಾರವಾಡದವನು. ಬಹಳ ಚೆನ್ನಾಗಿ ಉತ್ತರ ಕರ್ನಾಟಕದ ಕನ್ನಡ ಭಾಷೆಯನ್ನು ಮಾತನಾಡುತ್ತಾನೆ. ನನಗೆ ಬಹಳ ವರ್ಷಗಳಿಂದಲೂ ಒಂದು ಅಭ್ಯಾಸ ಅಂಟಿದೆ. ವಾರಕ್ಕೊಮ್ಮೆಯಾದರೂ ಮಂಡಕ್ಕಿ ಒಗ್ಗರಣೆ (ಉಸ್ಲಿ, ಸೂಸ) ತಿನ್ನಬೇಕು ಹಾಗೂ ಏಳು ದಿನಗಳಲ್ಲಿ ಒಂದು ಸಲವಾದರೂ ಅರ್ಧ ತಾಸಿನ ಸಮಯವಾದರೂ,  ಉತ್ತರ ಕರ್ನಾಟಕದ ಕನ್ನಡವನ್ನು, ಮನದುಂಬಿ ಕೇಳಿಸಿಕೊಳ್ಳಬೇಕು. ಮಂಡಕ್ಕಿ ಒಗ್ಗರಣೆ ನನ್ನ ಬಾಲ್ಯದ ದಿನಗಳನ್ನು ನೆನಪನ್ನು ತಾಜಾ ಮಾಡಿದರೆ, ಉತ್ತರ ಕರ್ನಾಟಕದ ಕನ್ನಡ ಭಾಷೆ, ನಾನು ಜೋಲಿಯಲ್ಲಿದ್ದಾಗ ಕೇಳುತ್ತಿದ್ದ ಕನ್ನಡದ ಜೋಗುಳ ಪದಗಳ ಅವರ್ಚನೀಯ ಆನಂದವನ್ನು ನೆನಪಿಗೆ ತರುತ್ತದೆ. ನನ್ನ ಅಜ್ಜಿ (ತಾಯಿಯ ಅಮ್ಮ) ಉತ್ತರ ಕರ್ನಾಟಕದವರು. ಎಳವೆಯಿಂದ ನನ್ನ ಆರೈಕೆ ಮಾಡಿದ ಅವರು ಆಡುತ್ತಿದ್ದ ಕನ್ನಡ ಭಾಷೆ ಇಂದು ನನ್ನ ನಾಲಗೆಯಲ್ಲಿ ನಿಂತು ನಲಿದಾಡುತ್ತಿಲ್ಲವಾದರೂ, ಅದು ನನ್ನ ಹೃದಯಾರವಿಂದದಲ್ಲಿ ಸ್ಥಿರಸ್ಥಾಯಿ ರೂಪದಲ್ಲಿ ನೆಲೆ ನಿಂತಿದೆ. "ಏನ್ ಸಾರ್, ದೇವಸ್ಥಾನಕ್ಕೆ ಹೋಗುತ್ತಿದ್ದೀರಾ? ಇಂದು ಆಷಾಢಮಾಸದ ದಿನ ಅಲ್ಲವೇನ್ರಿ?" ಎಂದು ನನ್ನ ಆಲೋಚನೆಗಳಿಂದ,  ನನ್ನನ್ನು ವಾಸ್ತವ ಜಗತ್ತಿಗೆ ಎಳೆದು ತಂದ ಇರ್ಷಾದ್ ಮಾತಿಗೆ ನಾನು ಸ್ವಲ್ಪ ತಡಬಡಿಸುತ್ತಲೇ, ಅನೈಚ್ಛಿಕವಾಗಿಯೇ,  "...

.. , ಹೊನ್ನು, ಮಣ್ಣು   ಹೆಣ್ಣು, ಹೊನ್ನು, ಮಣ್ಣಿಂದ ಜಗಕೆ ಕೆಡಕೆನ್ನುವಿರಿ ಸ್ಥಾವರಗಳೊಡೆ ಜಂಗಮವ ಸಮೀಕರಿಸುತ ನಿಮ್ಮೊಳಗಣ ಶರಣ ಅರಿವ ಕೊಲ್ಲುವಿರಿ! ಉಡುತಡಿಯ ಅಕ್ಕನು ಬಯಸಿದಳೆ ಮಲ್ಲಿಕಾರ್ಜುನಗೆ ಕೇಡ? ನಾಗಲಾಂಬಿಕೆಯೆಂದು ಕಾಡಿದಳು ಬಸವನ ಮಂಡಿಸುತ ಕಾರ್ಪಣ್ಯಗಳ ಮೋಡ? ಶರಣೆಯರಿಲ್ಲದೆ ಅನುಭಾವದ ಕಳೆ ಕಟ್ಟುತಿತ್ತೆ ಅನುಭವ ಮಂಟಪದ ಹಜಾರಕೆ? ನೀಲಮ್ಮನಿಲ್ಲದೆ ಜಂಗಮ ದಾಂಗುಡಿಯಿಡುತಿತ್ತೆ ಬಸವನ ಮಹಾಮನೆಯಂಗಳಕೆ? ಕುಣಿಸಿರಬಹುದು ನಿನ್ನ ನಿಯತ್ತುಗಳ  ಮರ್ಕಟನನು ಹೊನ್ನು, ಮಣ್ಣಿನ ಮೋಹ ಮಾಯೆ ಜನನಿಯಾಗಿ ನಿನ್ನ ಪೊರೆದ ಹೆಣ್ಣು ಎನಿತಡ್ಡಿವೆನಿಪಳು ಆಧ್ಯಾತ್ಮ ಉನ್ನತಿಗೆ ನೀ  ಒಲಿಯೆ? ಪುರುಷ ನೀನೆಂಬ ಅಹಂ ನಿನ್ನ ಮನದಳೊಕ್ಕು ತೃಣವೆನಿಸುತಿದೆ ಪ್ರಕೃತಿ ಚೈತನ್ಯವನು ಹೊನ್ನು, ಮಣ್ಣು ಮನದಿಚ್ಛೆೆಯಂತೆ ಗಳಿಸಬಹುದೆಂಬ ಹುಂಬತನ ಕಾಡುತಿದೆ ನಿನ್ನನು  ಪಡೆದು ನೋಡು ಈ ಜನುಮದ ಮತ್ತೊಬ್ಬ ಅಮ್ಮನನು! ಇನ್ನೊಮ್ಮೆ ಉಸುರದಿರು ಹೆಣ್ಣ ಹೆಸರ ಹೊನ್ನು ಮಣ್ಣುಗಳೊಡಗೂಡಿ ನಾನು ಶಿವ ಸುಟ್ಟು ಬಿಡುವೆ ಲೋಕದ ವಿಟಪುರುಷರ ಶರಣಸಂಕುಲದೊಡಗೂಡಿ! ಎನ್.ಸಿ. ಶಿವಪ್ರಕಾಶ್ ಮಸ್ಕತ್, ಒಮಾನ್
ಕಲ್ಯಾಣದಣ್ಣ, ಅಣ್ಣಾ ಬಾರೋ ಬಸವಣ್ಣಾ  ನಾನಾಗ ನಮ್ಮೂರಿನ ಸರಕಾರಿ ಬಾಲಕ ಬಾಲಕಿಯರ ಮಾಧ್ಯಮಿಕ ಶಾಲೆಯಲ್ಲಿ ಓದುತ್ತಿದ್ದೆ. ಬೇಸಗೆಯ ಸುಧೀರ್ಘ ರಜೆಯ ನಂತರ, ನಾನು ಐದನೆ ತರಗತಿಯಿಂದ ಬಡ್ತಿ ಹೊಂದಿ, ಖುಷಿಯಿಂದ ಹೊಕ್ಕ ಆರನೇ ಇಯತ್ತೆಯ ಕ್ಲಾಸುಗಳು ಪ್ರಾರಂಭವಾಗಿ ಒಂದು ವಾರ ಕಳೆದಿರಬಹುದಷ್ಟೆ.  ಅಂದು ಮಂಗಳವಾರ. ಕ್ಲಾಸಿನ ಮೊದಲನೇ ಪಿರಿಯಡ್ಡಿನಲ್ಲಿ ಇಂಗ್ಲೀಷ್ ಪಾಠ ಇನ್ನೇನು ಶುರುವಾಗಬೇಕು, ಅಷ್ಟರಲ್ಲಿ, ಶಾಲೆಯ ಜವಾನ ತಮ್ಮಯ್ಯ ಒಬ್ಬ ಹುಡುಗನೊಟ್ಟಿಗೆ,  ತರಗತಿಯ ಬಾಗಿಲ ಬಳಿ ಬಂದು ನಿಂತಿದ್ದು,  ಅದಾಗಲೇ ತರಗತಿಯೊಳಗೆ ಕಾಲಿಟ್ಟು, ತಮ್ಮ ಬೋಧನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಭೀಮಪ್ಪ ರೆಡ್ಡಿ ಮಾಸ್ತರರ ಚುರುಕು ಕಣ್ಣುಗಳಿಂದ ತಪ್ಪಿಸಕೊಳ್ಳಲಾಗಲಿಲ್ಲ. ತರಗತಿಯ ಹೊಸ್ತಿಲ ಹೊರಗೇ ನಿಂತಿದ್ದ ಇಬ್ಬರನ್ನೂ ಮಾಸ್ತರು ಒಳಗೆ ಬರ ಹೇಳಿದರಾದರೂ, ಕೇವಲ ತಾನು ಕರೆ ತಂದಿದ್ದ ಹುಡುಗನನ್ನಷ್ಟೇ ಕ್ಲಾಸಿನ ಒಳಗೆ ಕಳುಹಿಸಿದ ತಮ್ಮಯ್ಯ, "ಸಾರು, ಹೊಸಾ ಹುಡುಗ, ಇವತ್ತು ಅಡ್ಮಿಷನ್ ಆಗೌನೆ, ವಿನುತಾ ಮೇಡಂ ಒಸಿ ನಿಮ್ಗೆ ತಿಳಿಸಿ ಕ್ಲಾಸಿನೊಳಗೆ ಬಿಡಲು ಹೇಳಿದ್ದಾರೆ" ಎಂದವನು ಮಾಸ್ತರರ ಉತ್ತರಕ್ಕೂ ಕಾಯದೆ,  ಅದಾಗಲೇ ಅಲ್ಲಿಂದ ಕಾಲ್ಕಿತ್ತಿದ್ದ. ಕೆಂಪು, ಕೆಂಪಗೆ ಸಪೂರವಾಗಿ ಇದ್ದ ಹೊಸ ಹುಡುಗ ಕ್ಲಾಸಿನಲ್ಲಿದ್ದ ನಾವು ಇಪ್ಪತ್ತೆಂಟು ವಿದ್ಯಾರ್ಥಿಗಳಿಗಿಂತಲೂ,  ನೀಟಾದ ಬಟ್ಟೆಬರೆ ಧರಿಸಿದ್ದ. ಮಾಸ್ತರನ್ನೂ ಸೇರಿದಂತೆ, ತರಗತಿಯಲ್...