ಶರಣ ಇರ್ಷಾದ್
ಶರಣ ಇರ್ಷಾದ್ ಇವತ್ತಿನ ಅಂತರ್ಜಾಲ ಪ್ರವಚನಗೋಷ್ಠಿಯ ನಂತರ, ದೇವಸ್ಥಾನಕ್ಕೆ ಹೊರಟು ಲಿಫ್ಟ್ ಏರಿದ ಹೊತ್ತು, ನಮ್ಮ ಬಿಲ್ಡಿಂಗ್ ಕೇರ್ ಟೇಕರ್ ಇರ್ಷಾದ್ ಸಿಕ್ಕ. ಇರ್ಷಾದ್ ಧಾರವಾಡದವನು. ಬಹಳ ಚೆನ್ನಾಗಿ ಉತ್ತರ ಕರ್ನಾಟಕದ ಕನ್ನಡ ಭಾಷೆಯನ್ನು ಮಾತನಾಡುತ್ತಾನೆ. ನನಗೆ ಬಹಳ ವರ್ಷಗಳಿಂದಲೂ ಒಂದು ಅಭ್ಯಾಸ ಅಂಟಿದೆ. ವಾರಕ್ಕೊಮ್ಮೆಯಾದರೂ ಮಂಡಕ್ಕಿ ಒಗ್ಗರಣೆ (ಉಸ್ಲಿ, ಸೂಸ) ತಿನ್ನಬೇಕು ಹಾಗೂ ಏಳು ದಿನಗಳಲ್ಲಿ ಒಂದು ಸಲವಾದರೂ ಅರ್ಧ ತಾಸಿನ ಸಮಯವಾದರೂ, ಉತ್ತರ ಕರ್ನಾಟಕದ ಕನ್ನಡವನ್ನು, ಮನದುಂಬಿ ಕೇಳಿಸಿಕೊಳ್ಳಬೇಕು. ಮಂಡಕ್ಕಿ ಒಗ್ಗರಣೆ ನನ್ನ ಬಾಲ್ಯದ ದಿನಗಳನ್ನು ನೆನಪನ್ನು ತಾಜಾ ಮಾಡಿದರೆ, ಉತ್ತರ ಕರ್ನಾಟಕದ ಕನ್ನಡ ಭಾಷೆ, ನಾನು ಜೋಲಿಯಲ್ಲಿದ್ದಾಗ ಕೇಳುತ್ತಿದ್ದ ಕನ್ನಡದ ಜೋಗುಳ ಪದಗಳ ಅವರ್ಚನೀಯ ಆನಂದವನ್ನು ನೆನಪಿಗೆ ತರುತ್ತದೆ. ನನ್ನ ಅಜ್ಜಿ (ತಾಯಿಯ ಅಮ್ಮ) ಉತ್ತರ ಕರ್ನಾಟಕದವರು. ಎಳವೆಯಿಂದ ನನ್ನ ಆರೈಕೆ ಮಾಡಿದ ಅವರು ಆಡುತ್ತಿದ್ದ ಕನ್ನಡ ಭಾಷೆ ಇಂದು ನನ್ನ ನಾಲಗೆಯಲ್ಲಿ ನಿಂತು ನಲಿದಾಡುತ್ತಿಲ್ಲವಾದರೂ, ಅದು ನನ್ನ ಹೃದಯಾರವಿಂದದಲ್ಲಿ ಸ್ಥಿರಸ್ಥಾಯಿ ರೂಪದಲ್ಲಿ ನೆಲೆ ನಿಂತಿದೆ. "ಏನ್ ಸಾರ್, ದೇವಸ್ಥಾನಕ್ಕೆ ಹೋಗುತ್ತಿದ್ದೀರಾ? ಇಂದು ಆಷಾಢಮಾಸದ ದಿನ ಅಲ್ಲವೇನ್ರಿ?" ಎಂದು ನನ್ನ ಆಲೋಚನೆಗಳಿಂದ, ನನ್ನನ್ನು ವಾಸ್ತವ ಜಗತ್ತಿಗೆ ಎಳೆದು ತಂದ ಇರ್ಷಾದ್ ಮಾತಿಗೆ ನಾನು ಸ್ವಲ್ಪ ತಡಬಡಿಸುತ್ತಲೇ, ಅನೈಚ್ಛಿಕವಾಗಿಯೇ, "...